ಅಂತರ್ಜಾಲ ಜಾಲಡುವಾಗ ದೊರೆಯುವ ಅನೇಕ ಪುಟಗಳನ್ನು ಪ್ರಿಂಟ್ ಮಾಡಿ ಇಟ್ಟುಕೊಳ್ಳೋಣ ಅಂದ್ರೆ ಆಗಾಗ ಅದು ಸಾಧ್ಯ ಆಗದೆ ಹೋಗಬಹುದು. ಆ ಕೊಂಡಿಗಳನ್ನು ಬುಕ್ ಮಾರ್ಕ್ ಮಾಡಿ ನಂತರ ತೆಗೆದು ನೋಡೋದು ಅಂದ್ರೆ ಕನಸೇ ಬಿಡಿ. ಆಹ್! ಒಂದು ಪ್ರಿಂಟರ್ ಇದ್ದಿದ್ರೆ ಅನ್ಸೋದಂತೂ ನಿಜ. ಒಂದು ಸಣ್ಣ ಉಪಾಯ ಹೇಳಿಕೊಡ್ಲಾ?
ಉಬುಂಟು ಉಪಯೋಗಿಸ್ತಿದ್ರೆ, ctrl + p ಪ್ರೆಸ್ ಮಾಡಿ ನೀವು ಬ್ರೌಸ್ ಮಾಡುತ್ತಿರುವ ಪೇಜ್ ಅನ್ನು ಪ್ರಿಂಟರ್ ಇಲ್ಲದೆ ಕೂಡ ಪ್ರಿಂಟ್ ಮಾಡಿಕೊಳ್ಳಬಹುದು. ಹೌದು PDF, PS (Post Script) ಅಥವಾ SVG (Simple Vector Graphics) ಫೈಲುಗಳಾಗಿ ನೀವು ಪುಟಗಳನ್ನು ಸೇವ್ ಮಾಡಿಕೊಳ್ಳಬಹುದು. ಪ್ರಿಂಟರ್ ಇಲ್ಲದಿದ್ದಾಗ ಒಂದು ಪಿ.ಡಿ.ಎಫ್ ನಲ್ಲಿ ನಿಮಗೆ ಬೇಕಾದ ಪುಟ ದೊರೆತರೆ ಅದನ್ನು ಮೇಲ್ ಮಾಡಿಕೊಳ್ಳಲಿಕ್ಕೆ, ನಂತರ ಅದನು ಪ್ರಿಂಟರ್ ಸಿಕ್ಕಾಗ ಪ್ರಿಂಟ್ ಮಾಡಿಕೊಳ್ಳಲಿಕ್ಕೆ ಸುಲಭ ಅಲ್ವೇ? ಪ್ರಿಂಟ್ ಮಾಡಿಕೊಳ್ಳುವಾಗ ನಿಮಗೆ ಕಾಣುವ ವಿಂಡೋ ಕೆಳಗಿನ ಚಿತ್ರದಲ್ಲಿದೆ. Print to File ಅನ್ನೋದನ್ನು ಸೆಲೆಕ್ಟ್ ಮಾಡಿಕೊಂಡು ನಂತರ ಎಲ್ಲಿ ಆ ಫೈಲ್ ಸ್ಟೋರ್ ಮಾಡಬೇಕು ಎಂದು ತಿಳಿಸಿ, ಯಾವ ಮಾದರಿಯಲ್ಲಿ ಫೈಲನ್ನು ಉಳಿಸಬೇಕೆಂದು ತಿಳಿಸಿದರೆ ಆಯಿತು.

ಈಗ ಪಿ.ಡಿ.ಎಫ್ ಸಿದ್ದ. ಪ್ರಿಂಟರ್ ಇರುವೆಡೆ ಹೊಯ್ದು ಪ್ರಿಂಟ್ ಮಾಡಿಕೊಳ್ಳಿ.






ನಿಮ್ಮ ಪ್ರತಿಕ್ರಿಯೆಗಳು