ನವೆಂಬರ್ ೨೦೧೦ ರಲ್ಲಿ ನಾವೆಲ್ ತಾನು ಅಟ್ಯಾಚ್‌ಮೇಟ್ ತೆಕ್ಕೆಗೆ ಸರಿಯುವುದಾಗಿ ಹೇಳಿದ್ದರೂ ಕಳೆದವಾರದವರೆಗೆ ಅದು ನಿಜವಾಗಿರಲಿಲ್ಲ. ಯು.ಎಸ್ ಕಾನೂನು ಇಲಾಕೆಯ ಕೊನೆಯಗಳಿಗೆಯ ಹೊಂದಾಣಿಕೆಗಳಿಂದಾಗಿ ನಾವೆಲ್ ತನ್ನ ವ್ಯಾವಹಾರಿಕ ಸಂಬಂದಗಳಿಗೆ ಅಟ್ಯಾಚ್‌ಮೇಟ್ ನೊಂದಿಗೆ ೨.೨ ಬಿಲಿಯನ್ ಡಾಲರುಗಳ ಒಪ್ಪಂದಕ್ಕೆ ಕೊನೆಗೂ ಸಹಿ ಹಾಕಿದೆ.
ಅಟ್ಯಾಚ್‌ಮೇಟ್‌ನ ಒಡೆತನದಲ್ಲಿ ನಾವೆಲ್ ಪೂರ್ಣಪ್ರಮಾಣದ ಅಂಗಸಂಸ್ಥೆಯಾಗಿ ಬೆಳೆಯಲಿದೆ. ನಾವೆಲ್ ನ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಕ್ಕೆ ಸಂಬಂದಿಸಲ್ಪಟ್ಟ ಕೆಲಸಗಳಿಗೆ ತಾನು ಬೆನ್ನೆಲುಬಾಗಿರುವುದಾಗಿಯೂ, ಮತ್ತು ನಾವೆಲ್ ನ ಕಮರ್ಶಿಯಲ್ SUSE ಲಿನಕ್ಸ್ ಹಾಗು ಸಮುದಾಯ ಯೋಜನೆ openSUSE ಎರಡನ್ನೂ ಬೆಂಬಲಿಸುತ್ತಾ ಮುನ್ನೆಡೆಯುವುದಾಗಿ ಅಟ್ಯಾಚ್‌ಮೆಂಟ್ ಒತ್ತಾಸೆ ನೀಡಿದೆ.
ಇಂತಹ ವ್ಯಾವಹಾರಿಕ ಒಪ್ಪಂದಗಳು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಕಂಪೆನಿಗಳ ಮೇಲೆ ತಮ್ಮದೇ ಆದ ಬದಲಾವಣೆಯ ಗಾಳಿಯನ್ನು ಬೀಸುವುದು ಸರ್ವೇ ಸಾಮಾನ್ಯವಾಗಿ ಕಂಡು ಬಂದಿದ್ದರೂ, ನಾವೆಲ್ ನ ಭವಿಷ್ಯವನ್ನು ಕಾಲವೇ ನಿಶ್ಚಯಿಸಲಿದೆ. ಹೊಸ ಒಡೆತನ ಹೊಸ ಮೈಲಿಗಲ್ಲಿಗೆ ನಾವೆಲ್ ಅನ್ನು ಮುಟ್ಟಿಸಲಿ ಎಂದು ಹಾರೈಸುತ್ತಾ.






ನಿಮ್ಮ ಪ್ರತಿಕ್ರಿಯೆಗಳು