ಕರ್ನೆಲ್ ಅಪ್ಡೇಟ್

Tux, Larry Ewing ಚಿತ್ರಿಸಿದಂತೆ, ಚಿತ್ರ: ವಿಕಿಪೀಡಿಯಾ

ಪ್ರತಿಯೊಂದು ಗ್ನು/ಲಿನಕ್ಸ್ ನ ಹೃದಯ ಭಾಗ ಲಿನಕ್ಸ್ ಕೆರ್ನೆಲ್. ಗ್ನು/ಲಿನಕ್ಸ್ ನ ಪ್ರತಿಯೊಂದು ಕಾರ್ಯಭಾಗಗಳನ್ನು ಕಾರ್ಯನಿರತರನ್ನಾಗಿಸಿ, ಕಂಪ್ಯೂಟರಿನ ಹಾರ್ಡ್ವೇರ್ ಗಳು ಕೆಲಸಮಾಡುವಂತಾಗಿಸುವುದು ಕರ್ನೆಲ್.

ಗ್ನು/ಲಿನಕ್ಸ್ ನ ಕೆಲವು ವಿತರಣೆಗಳು ಕರ್ನೆಲ್ ನ ಅಭಿವೃದ್ದಿಯ ಪಥವನ್ನು ಹಿಂಬಾಲಿಸುತ್ತಾ ಸಾಗಿದರೆ, ಮತ್ತೆ ಕೆಲವು “stable long-term release” ಅಥವಾ ಬಹುಕಾಲದವರೆಗೆ ಸುರಕ್ಷತೆಗೆ ಸಂಭಂದಪಟ್ಟ ಅಪ್ಡೇಟ್ ಗಳನ್ನು ಒದಗಿಸುವ ಆವೃತ್ತಿಗಳನ್ನು ನೆಚ್ಚಿಕೊಂಡಿರುತ್ತವೆ. ಹೊಸ ಕರ್ನೆಲ್ ವಿತರಣೆ ಪ್ರತಿ ಮೂರು ತಿಂಗಳಿಗೊಮ್ಮೆ ಆಗುವುದರಿಂದ ಇದನ್ನು ಹಿಂಬಾಲಿಸುವುದು ಅನೇಕ ಉತ್ಪಾದಕರಿಗೆ ಮತ್ತು ವಿತರಣೆಗಳಿಗೆ ಕಷ್ಟಸಾಧ್ಯ.

ಇಂತಹ ಬಳಕೆದಾರರು ಮತ್ತು ಉತ್ಪಾದಕರಿಗೆ ಏಪ್ರಿಲ್ ಕೊನೆಯ ವಾರದಲ್ಲಿ ಆಂಡಿ ಕ್ಲೀನ್ (Andi Kleen) 2.6.35.13 long-term support kernel ಬಿಡುಗಡೆಗೊಳಿಸಿದ. ಈ 2.6.35.13 ಆವೃತ್ತಿ ಯಾವುದೇ ಸೆಕ್ಯೂರಿಟಿ ಅಪ್ದೇಟ್ ಅಥವಾ ಹೊಸ ವೈಶಿಷ್ಟ್ಯಗಳನ್ನೇನೂ ಹೊಂದಿರಲಿಲ್ಲ.

ಇದಕ್ಕೆ ವಿರುದ್ದವಾಗಿ, ಲಿನುಸ್ ಟೋರ್ವಾಲ್ಡ್ಸ್ ಲಿನಕ್ಸ್ ಕರ್ನೆಲ್‌ನ ಇತ್ತೀಚೆಗಷ್ಟೆ ಅಭಿವೃದ್ದಿಪಡಿಸಿದ ಲಿನಕ್ಸ್ ಕರ್ನೆಲ್‌ನ ಆವೃತ್ತಿಗಳನ್ನು ಬಳಕೆದಾರರಿಗೆ ತಲುಪಿಸುವ ಕಾರ್ಯವನ್ನು ಮುಂದುವರೆಸಿದ್ದಾರೆ. ಮೇ ಮೊದಲನೆ ವಾದ 2.6.39 ಕರ್ನೆಲ್ ನ ೫ನೇ ಆವೃತ್ತಿ ಬಿಡುಗಡೆ ಕಂಡಿದೆ.

ಹೊಸ ಡ್ರೈವರ್ ಮತ್ತು ಹಾರ್ಡ್ವೇರ್ ಗಳ ಉಪಲಭ್ದತೆಯೊಂದಿಗೆ, ೨.೬.೩೯ ಕರ್ನೆಲ್ ಹೊಸ ಬ್ಲಾಕ್ ಡಿವೈಸ್ ಪ್ಲಗ್ಗಿಂಗ್ ಮಾಡೆಲ್ ಅನ್ನು ತನ್ನೊಂದಿಗೆ ಸೇರಿಸಿಕೊಂಡಿದ್ದು, ಗ್ನು/ಲಿನಕ್ಸ್ ನ ಕಾರ್ಯಸಾಮರ್ಥ್ಯದ ವೇಗವನ್ನು ಹೆಚ್ಚಿಸಲಿದೆ. ೨.೬.೩೯ ಕೆರ್ನೆಲ್ ನ ಕೊನೆಯ ಬಿಡುಗಡೆ ಈ ತಿಂಗಳಿನ ಕೊನೆಯಲ್ಲಿ ಆಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This