ಉಬುಂಟು ೧೧.೦೪ (ನ್ಯಾಟಿ ನಾರ್ವಾಲ್) ಬಳಸುವವರಿಗೆ ಹೊಸ ಯುನಿಟಿ(Unity) ಡೆಸ್ಟಾಪ್ ಇಷ್ಟವಾದರೂ ಅದನ್ನು ಬಳಸುವುದು ಕಷ್ಟವಾಗಬಹುದು. ಮುಖ್ಯ ಕಾರಣ ಗ್ರಾಫಿಕ್ಸ್ ಕಾರ್ಡ್ ನ ಬೆಂಬಲ. nVidia ದ ಅನೇಕ ಕಾರ್ಡ್ ಗಳು ಹಳೆಯ ಡ್ರೈವರ್ ಸಹಾಯದಿಂದ ಕೆಲಸ ಮಾಡಿದರೂ ಕೆಲವೊಮ್ಮೆ ಕಪ್ಪು ಪರದೆಯಿಂದ ಬಳಕೆದಾರರನ್ನು ಹೆದರಿಸುವುದುಂಟು. ಹೀಗಿದ್ದೂ ಯುನಿಟಿಯನ್ನೊಮ್ಮೆ ತಮ್ಮ ಕಂಪ್ಯೂಟರಿನಲ್ಲಿ ನೋಡಲಿಚ್ಚಿಸುವವರು ಯುನಿಟಿಯ ೨ಡಿ ಆವೃತ್ತಿಯನ್ನು ಉಪಯೋಗಿಸಿ ನೋಡಬಹುದು.
ಯುನಿಟಿ ೨ಡಿ ಇನ್ಸ್ಟಾಲ್ ಮಾಡಿಕೊಳ್ಳಲು ಈ ಕೆಳಗಿನ ಕಮ್ಯಾಂಡ್ ಅನ್ನು ಕನ್ಸೋಲಿನಲ್ಲಿ ಕುಟ್ಟಿದರಾಯ್ತು.
sudo apt-get install unity-2d
ಇದಾದ ನಂತರ ಲಾಗಿನ್ ಆಗುವ ಸಮಯದಲ್ಲಿ ಯುನಿಟಿ ೨ಡಿ ಆಯ್ಕೆ ಮಾಡಿಕೊಂಡರಾಯ್ತು.
ಈಗ ಯುನಿಟಿ -೨ಡಿ ನಲಿ ಜಾಲಾಡಿ.
ನಿಮ್ಮ ಪ್ರತಿಕ್ರಿಯೆಗಳು