ಸ್ವತಂತ್ರವಾಗಿ ಜ್ಞಾನವನ್ನು ಹಂಚಿಕೊಳಲು ಇರುವ ವಿಶ್ವಕೋಶ ವಿಕಿಪೀಡಿಯ(https://wikipedia.org). ನಿಮಗೆ ಈ ಮೊದಲೇ ತಿಳಿಯದಿದ್ದರೆ, ಕನ್ನಡದಲ್ಲೂ ಇದರ ಆವೃತ್ತಿ ಲಭ್ಯವಿದೆ. ೧೨ ಸಾವಿರದಷ್ಟು ಲೇಖನಗಳು ನನ್ನ ಹಾಗೂ ನಿಮ್ಮಂತಹವರ ಶ್ರಮದಿಂದ ಕನ್ನಡ ವಿಕಿಪೀಡಿಯದಲ್ಲಿ ಲಭ್ಯವಿದೆ. ಸಮುದಾಯದ ಹಾಗು ಮಾನವನ ಒಳಿತಿಗೆ ಜಿಮ್ಮಿ ವೇಲ್ಸ್ ಸೃಷ್ಟಿಸಿದ ಈ ವೇದಿಕೆ ೨೦೦ ಕ್ಕೂ ಹೆಚ್ಚು ಭಾಷೆಗಳಲ್ಲಿ ವಿಶ್ವದ ಜನರಿಗೆ ಜ್ಞಾನದ ಹರಿವನ್ನು ಹಂಚುತ್ತಿದೆ. ಕನ್ನಡ ವಿಕಿಪೀಡಿಯ ಜೂನ್ ೧೨ ರಂದು ೯ ವರ್ಷಗಳನ್ನು ಪೂರೈಸಿತು. ಈ ಸಂದರ್ಭವನ್ನು ಅನೇಕ ಕನ್ನಡಿಗರು, ತಮ್ಮ ಗೆಳೆಯರು ಹಾಗೂ ಸಹೋದ್ಯೋಗಿಗಳ ಜೊತೆ ವಿಕಿಪೀಡಿಯದ ಮಾಹಿತಿಯನ್ನು ಹಂಚಿಕೊಂಡು, ಮತ್ತಷ್ಟು ಜನರನ್ನು ತಮ್ಮ ಜ್ಞಾನವನ್ನು ಇತರರೊಡನೆಯೂ ಹಂಚಿಕೊಳ್ಳುವುದಕ್ಕೆ ಪ್ರೇರೇಪಿಸಿದರು.
ನೀವೂ ಕೂಡ ಈ ಕೆಲಸದಲ್ಲಿ ಭಾಗಿಯಾಗಬಹುದು. ವರ್ಷಾಚರಣೆಯ ಮಾಹಿತಿ ಹಾಗೂ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ನಿಮಗೆ ಲಭ್ಯ.
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಶ್ರೀ ಯು.ಆರ್ ಅನಂತಮೂರ್ತಿಯವರನ್ನು ಕನ್ನಡ ವಿಕಿಪೀಡಿಯ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದಾಗ ಸಂಗ್ರಹಿಸಿದ ವಿಡಿಯೋ ಇಲ್ಲಿದೆ.
ಬೆಂಗಳೂರಿನ ಕನ್ನಡ ವಿಕಿಪೀಡಿಯನ್ನರು ಜೂನ್ ೧೭ ರಂದು ದೊಮ್ಮಲೂರಿನ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿಯಲ್ಲಿ ಸೇರಲಿದ್ದಾರೆ. ಮೇಲಿನ ಕೊಂಡಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಲು ಮರೆಯದಿರಿ. ನೀವೂ ಲಾಗಿನ್ ಆಗಿ ಕನ್ನಡ ವಿಕಿಪೀಡಿಯ ಪುಟಗಳನ್ನು ಸಂಪಾದಿಸಲು ಮರೆಯದಿರಿ.
ವಿಕಿಪೀಡಿಯದ ಹಿಂದೆ ಇರುವ ಎಲ್ಲ ಕೈಗಳಿಗೆ ಶುಭಾಷಯಗಳು.






ನಿಮ್ಮ ಪ್ರತಿಕ್ರಿಯೆಗಳು