UEFI ಬಗ್ಗೆ ಲಿನಕ್ಸಾಯಣದಲ್ಲಿ ಈಗಾಗಲೇ ಓದಿದ್ದೀರಿ. ಆದರೆ ಮೈಕ್ರೋಸಾಫ್ಟ್ ಕಂಪೆನಿ ಬಳಕೆದಾರರು ಈ ಹೊಸ ಬಯೋಸ್‌ನ ಕೀ ಅನ್ನು ವಿಂಡೋಸ್ ಆವೃತ್ತಿ ೮ ನ್ನು ಬಳಸುವ ARM ಪ್ರಾಸೆಸರ್‌ಗಳಲ್ಲಿ ಬದಲಿಸಲಾಗದಂತೆ ಮಾಡಲು, ಪ್ರಾಸೆಸರ್ ಉತ್ಪನ್ನ ಮಾಡುವ ಕಂಪೆನಿಗಳ ಮೇಲೆ ಒತ್ತಡ ಹೇರುತ್ತಿದೆ. ಲಿನಕ್ಸ್ ನಲ್ಲಿ ಸುರಕ್ಷಿತ ಬೂಟಿಂಗ್‌ಬಗ್ಗೆ ಇನ್ನೂ ಗೊಂದಲಗಳಿದ್ದರೂ, ಉಬುಂಟು ಮತ್ತು ಫೆಡೋರ UEFI ಅನ್ನು ಬಳಕೆದಾರರು ಬಳಸುವಂತೆ ಮಾಡಲು ಮುಂದಾಗಿವೆ.
ಕಂಪ್ಯೂಟರ್ ತಂತ್ರಾಂಶಗಳು ಮುಕ್ತವಾಗಿ ಹಾಗು ಸ್ವತಂತ್ರವಾಗಿ ಸಿಗಬೇಕು ಎಂದು ಸ್ವತಂತ್ರ ತಂತ್ರಾಂಶ ಆಂದೋಲನವನ್ನು ಪ್ರಾರಂಭಿಸಿದ, ಸ್ವತಂತ್ರ ತಂತ್ರಾಂಶ ಪಿತಾಮಹ ಎಂದೇ ಕರೆಯಲ್ಪಡುವ ರಿಚರ್ಡ್ ಸ್ಟಾಲ್‌ಮನ್, ಮೈಕ್ರೋಸಾಫ್ಟ್ ಬಳಕೆದಾರನನ್ನು ಬಯೋಸ್ ಮಟ್ಟದಲ್ಲಿ UEFI ಮೂಲಕ ಹಿಡಿದಿಡುತ್ತಿರುವುದರ ವಿರುದ್ದ ಧ್ವನಿ ಎತ್ತಿದ್ದಾರೆ. ಬಳಕೆದಾರನು ತಾನು ಕೊಂಡ ಕಂಪ್ಯೂಟರಿನ ಕೀ (ಗುಪ್ತ ಸಂಖ್ಯೆ)ಯನ್ನು ತಾನೇ ಬದಲಿಸಲಿಕ್ಕೆ ಸಾಧ್ಯವಾಗದಿದ್ದಲ್ಲಿ, ಅವನ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ ಮತ್ತು ಅವನು ಕಂಪ್ಯೂಟರನ್ನು ಕೊಂಡಿದ್ದರೂ, ಅದರ ಮೇಲೆ ಸಂಪೂರ್ಣ ಹಿಡಿತ ಹೊಂದಿರಲು ಸಾಧ್ಯವಾಗದಂತೆ ಮಾಡುವ ಕಾರ್ಯ ಎಂದು ಹೇಳಿದ್ದಾರೆ.
ಬೈಟ್ಸ್ ಮೀಡಿಯಾಗೆ ಅವರು ನೀಡಿದ್ದ ಸಂದರ್ಶನದ ವಿವರ ಈ ಕೊಂಡಿಯಲ್ಲಿದೆ. ಸಂದರ್ಶನದ ಧ್ವನಿ ಮುದಿಕೆಯೂ ನಿಮಗೆ ಇಲ್ಲಿ ಲಭ್ಯವಿದೆ.






ನಿಮ್ಮ ಪ್ರತಿಕ್ರಿಯೆಗಳು