ಉಬುಂಟು ಯುನಿಟಿ ಡೆಸ್ಕ್‌ಟಾಪ್ ಬಳಸುತ್ತಿದ್ದಲ್ಲಿ, ಅಪ್ಲಿಕೇಷನ್ ಪೋಕಸ್ ಬಹಳ ಕಿರಿಕಿರಿ ಕೊಡುತ್ತದೆ. ಮೆಸೆಂಜರ್ ಅಥವಾ ಇನ್ಯಾವುದೇ ತಂತ್ರಾಂಶದ ಮೇಲೆ ಕ್ಲಿಕ್ ಮಾಡಿದರೆ ಅದು ಲಾಂಚರ್‌ನ ಮಡಿಲಿಗೆ ಸೇರಿಕೊಂಡು ಮತ್ತೆ ಲಾಂಚರ್ ಕ್ಲಿಕ್ ಮಾಡಿ ಅಪ್ಲಿಕೇಷನ್ ಹುಡುಕುವ ಕೆಲಸ ಕೊಡುತ್ತದೆ.
ಈ ತೊಂದರೆಯನ್ನು ಅನೇಕ ಬಗೆಗಳಲ್ಲಿ ಸರಿ ಪಡಿಸಬಹುದು.
೧) ಕಾಂಪಿಜ್ (compiz) ಸೆಟಿಂಗ್ಸ್ ಮ್ಯಾನೇಜರ್ ಬಳಸಿ
ಅ) ಇದಕ್ಕೆ ಮೊದಲು compizconfig-settings-manager ಇನ್ಸ್ಟಾಲ್ ಮಾಡಿಕೊಳ್ಳಿ:
sudo apt-get install compizconfig-settings-manager
ಆ) ನಂತರ ಈ ಅಪ್ಲಿಕೇಷನ್ ಅನ್ನು ಪ್ರಾರಂಭಿಸಿ (Alt + F2 ಟೈಪ್ ಮಾಡಿ ccsm ಟೈಪಿಸಿ Enter ಪ್ರೆಸ್ ಮಾಡಿ )
ಇ) ಈಗ “General Options” > “Focus & Raise Behaviour” ಗೆ ಹೋಗಿ “Focus Prevention Level” ಅನ್ನು “Off” ಎಂದು ಬದಲಿಸಿ.
ಇದು ನಿಮ್ಮ ಅಪ್ಲಿಕೇಷನ್ ಫೋಕಸ್ ತೊಂದರೆಯನ್ನು ನಿವಾರಿಸುತ್ತದೆ.
೨) ನೇರವಾಗಿ ಕನ್ಸೋಲ್ ಮೂಲಕ ಸರಿಪಡಿಸಿ
ಈ ಕೆಳಗಿನ ಒಂದು ಸಾಲನ್ನು ಕನ್ಸೋಲ್ ಮೂಲಕ ಟೈಪಿಸುವುದರಿಂದ ಕೂಡ ಅಪ್ಲಿಕೇಷನ್ ಫೋಕಸ್ ತೊಂದರೆಯನ್ನು ನಿವಾರಣೆಯಾಗುತ್ತದೆ.
gconftool-2 --type=Integer --set /apps/compiz-1/general/screen0/options/focus_prevention_level 0
೩) ಉಬುಂಟು ೧೩.೦೪ ಆವೃತ್ತಿಯಲ್ಲಿ ಇರುವ ಯುನಿಟಿ ಟ್ವೀಕ್ ಟೂಲ್ ಬಳಸಿ
ಉಬುಂಟು ೧೩.೦೪ ನಲ್ಲಿ unity-tweak-tool ಎಂಬ ತಂತ್ರಾಂಶವನ್ನು ಯುನಿಟಿಗೆ ಸಂಬಂಧಿಸಿದ ಬದಲಾವಣೆಗಳನ್ನು ಮಾಡಲು ನೀಡಲಾಗಿದೆ.
ಮೊದಲು unity-tweak-tool ಇನ್ಸ್ಟಾಲ್ ಮಾಡಿಕೊಳ್ಳಿ. ನಂತರ ಯುನಿಟಿ ಟ್ವೀಕ್ ಟೂಲ್ ನ ವಿಂಡೋಸ್ ಮ್ಯಾನೇಜರ್ ವಿಭಾಗದ ಆಡಿಷನಲ್ ಆಯ್ಕೆ ಕ್ಲಿಕ್ ಮಾಡಿ.
ನಂತರ ಅದರಲ್ಲಿ Auto Raise ಮತ್ತು Focus Mode ಸೆಟ್ಟಿಂಗ್‌ಗಳನ್ನು ಬದಲಿಸಿ ಈ ತೊಂದರೆ ನಿವಾರಿಸಬಹುದು.









ನಿಮ್ಮ ಪ್ರತಿಕ್ರಿಯೆಗಳು