ಇನ್ಸ್ಟಾಲೇಷನ್

Written By Omshivaprakash H L

May 22, 2013

ಐ-ಫೋನ್, ಐ-ಪ್ಯಾಡ್ ಚಾರ್ಜ್ ಮಾಡಿ

ಉಬುಂಟು/ಡೆಬಿಯನ್‌ನಲ್ಲಿ ಐ-ಫೋನ್, ಐ-ಪ್ಯಾಡ್ಗಳನ್ನು ಯು.ಎಸ್.ಬಿ ಮೂಲಕ ಕನೆಕ್ಟ್ ಮಾಡಿದಾಗ ಇತರೆ ಮೊಬೈಲ್‌ಗಳಂತೆ ಅವು ಚಾರ್ಜ್ ಆಗುವುದಿಲ್ಲ. ಇದಕ್ಕೆಂದೇ ipad_charge ಎಂಬ ತಂತ್ರಾಂಶ ಲಭ್ಯವಿದೆ. ಇದನ್ನು ಬಳಸಿ, ಈ ಕೆಳಗೆ ನೀಡಿರುವ ಆಪಲ್ ಹಾರ್ಡ್‌ವೇರ್‌ಗಳನ್ನು ಚಾರ್ಜ್ ಮಾಡಬಹುದು.

iPad
iPad2
iPad3
iPad mini
iPod Touch 2G
iPod Touch 3G
iPod Touch 4G
iPhone 3GS
iPhone 4
iPhone 4S

ipad_charge ಅನ್ನು ನಿಮ್ಮ ಸಿಸ್ಟಂ‌ನಲ್ಲಿ ಇನ್ಸ್ಟಾಲ್ ಮಾಡಲು, ಟರ್ಮಿನಲ್ ಓಪನ್ ಮಾಡಿ ಈ ಕೆಳಗೆ ನೀಡಿರುವ ಕಮ್ಯಾಂಡುಗಳನ್ನು ಟೈಪಿಸಿ

sudo apt-get install -y build-essential libusb-1.0-0 libusb-1.0-0-dev vim git-core git-doc

ನಂತರ ಗಿಟ್‌ಹಬ್‌ನಲ್ಲಿ mkorenkov ಅವರ ತಂತ್ರಾಂಶವನ್ನು ಗಿಟ್ ಇಳಿಸಿಕೊಂಡು, ಆ ನಂತರ ಕೊಟ್ಟಿರುವ ಕಮ್ಯಾಂಡುಗಳ ಮೂಲಕ ಇನ್ಸ್ಟಾಲ್ ಮಾಡಿ.

git clone https://github.com/mkorenkov/ipad_charge.git

cd ./ipad_charge

make

sudo make install

ಇದು ipad_charge ಬೈನರಿಯನ್ನು /usr/bin ಗೆ, ಮತ್ತು 95-ipad_charge.rules ಅನ್ನು /etc/udev/rules.d ನಲ್ಲಿ ಸೇರಿಸುತ್ತದೆ. udev ರೂಲು ಇದನ್ನು ಬಳಸಿಕೊಂಡು ಐ-ಪ್ಯಾಡ್ ಅಥವಾ ಐ-ಫೋನ್ ಅನ್ನು ಚಾರ್ಜ್ ಆಗುವಂತೆ ಮಾಡುತ್ತದೆ.

ಚಾರ್ಜ್ ಆಗುವುದು ಪ್ರಾರಂಭವಾಗದಿದ್ದಲ್ಲಿ,

ipad_charge

ಎಂದು ಟರ್ಮಿನಲ್‌ನಲ್ಲಿ ಟೈಪಿಸಿ.

ಚಾರ್ಜ್ ಮಾಡುವುದನ್ನು ನಿಲ್ಲಿಸಲು

ipad_charge –off ಬಳಸಿ

ಹೆಚ್ಚಿನ ಮಾಹಿತಿಗೆ https://github.com/mkorenkov/ipad_charge

RAMನ ವೇಗ ಪರೀಕ್ಷೆ ಮಾಡುವುದು

ಗ್ನು/ಲಿನಕ್ಸ್‌ನಲ್ಲಿ ನಿಮ್ಮ ಸಿಸ್ಟಂ ಮೆಮೊರಿ ಎಂತದ್ದು ಎಂದು ಪರೀಕ್ಷಿಸಲು dmidecode ಎಂಬ ಆದೇಶ ಸಹಾಯ ಮಾಡುತ್ತದೆ.

ಈ ಕೆಳಗಿನ ಆದೇಶವನ್ನು ನಿಮ್ಮ ಟರ್ಮಿನಲ್‌ನಲ್ಲಿ ಟೈಪಿಸಿ ಎಂಟರ್ ಪ್ರೆಸ್ ಮಾಡಿ:

sudo dmidecode --type 17

ನನ್ನ ಲ್ಯಾಪ್‌ಟಾಪ್‌ನಲ್ಲಿ ನನಗೆ ಕಂಡ ಉತ್ತರ ಇಂತಿದೆ:

$ sudo dmidecode –type 17
# dmidecode 2.11
SMBIOS 2.7 present.

Handle 0x0008, DMI type 17, 34 bytes
Memory Device
Array Handle: 0x0007
Error Information Handle: Not Provided
Total Width: 64 bits
Data Width: 64 bits
Size: 4096 MB
Form Factor: SODIMM
Set: None
Locator: ChannelA-DIMM0
Bank Locator: BANK 0
Type: DDR3
Type Detail: Synchronous
Speed: 1333 MHz
Manufacturer: Transcend
Serial Number: 000963FA
Asset Tag: None
Part Number: JM1333KSN-4G
Rank: Unknown
Configured Clock Speed: 1333 MHz

Handle 0x0009, DMI type 17, 34 bytes
Memory Device
Array Handle: 0x0007
Error Information Handle: Not Provided
Total Width: 64 bits
Data Width: 64 bits
Size: 2048 MB
Form Factor: SODIMM
Set: None
Locator: ChannelB-DIMM0
Bank Locator: BANK 2
Type: DDR3
Type Detail: Synchronous
Speed: 1333 MHz
Manufacturer: Hynix/Hyundai
Serial Number: 2D4EE244
Asset Tag: None
Part Number: HMT325S6CFR8C-PB
Rank: Unknown
Configured Clock Speed: 1333 MHz

ಮೇಲಿನ ಫಲಿತಾಂಶದಲ್ಲಿ ಹೈಲೈಟ್ ಮಾಡಿರುವ ವಿವರಗಳನ್ನು ನೋಡಿ ನಿಮ್ಮ ಸಿಸ್ಟಂ ಮೆಮೊರಿ ಬಗ್ಗೆ ತಿಳಿದುಕೊಳ್ಳಿ.

ಫೆಡೋರಾ ೧೮ ರಲ್ಲಿ ಕನ್ನಡ ಓದಿ ಬರೆ

ಫೆಡೋರ ೧೮ ರ ಆವೃತ್ತಿ ಹೊರಬಿದ್ದಿರುವುದನ್ನು ಕೆಲವು ದಿನಗಳ ಹಿಂದೆ ಓದಿರಬಹುದು. ಅದರ ಲೈವ್‌ಸಿಡಿಯಲ್ಲಿ ಕನ್ನಡವನ್ನು ಓದಲು ಬರೆಯಲು ಸುಲಭ ಸೂತ್ರ ಇಲ್ಲಿದೆ. ಲಾಗಿನ್ ಆದ ನಂತರ, ಸಿಸ್ಟಂ ಸೆಟ್ಟಿಂಗ್‌ನಲ್ಲಿ ‘Regional Language Settings’ ಮೇಲೆ ಕ್ಲಿಕ್ ಮಾಡಿ ಕನ್ನಡವನ್ನು ಸೇರಿಸಿಕೊಂಡರಾಯ್ತು. ಮೊದಲಿನಂತೆ ಇಂಟರ್ನೆಟ್ ಬಳಸಿ ibus ಅಥವಾ scim ಇನ್ಸ್ಟಾಲ್ ಮಾಡಿಕೊಳ್ಳುವ ಗೊಡವೆಗೆ ಹೋಗಬೇಕಿಲ್ಲ. ಕೀಬೋರ್ಡ್ ಲೇಔಟ್‌ಗಳನ್ನೂ ಕೂಡ ಇಲ್ಲಿಯೇ ಸೇರಿಸಿಕೊಳ್ಳಬಹುದು. itrans, kgp, inscript ಲೇಔಟ್‌ಗಳನ್ನು ನನ್ನ ಕಂಪ್ಯೂಟರ್‌ಗೆ ಸೇರಿಸಿರುವುದನ್ನು ಈ ಕೆಳಗಿನ ವಿಡಿಯೋದಲ್ಲಿ ಕಾಣಬಹುದು.

httpv://www.youtube.com/watch?v=L_W_CAzDo8M

ಸ್ಕೈಪ್(Skype)ಕಾಲ್ ರೆಕಾರ್ಡ್ ಮಾಡಿ

ಸ್ಕೈಪ್ ಅನ್ನು ಒಂದಲ್ಲಾ ಒಂದು ಕಾರಣದಿಂದ ನಮ್ಮಲ್ಲನೇಕರು ಗೆಳೆಯರೊಂದಿಗೆ, ವ್ಯವಹಾರಕ್ಕೆ, ಸಂಪರ್ಕದಲ್ಲಿರಲು,  ಕಚೇರಿಯ ಸಂವಾದ, ಸಂದರ್ಶನ ಇತ್ಯಾದಿಗಳಿಗೆ ಬಳಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಸ್ಕೈಪ್ ಮೂಲಕ ನೆಡೆಯುವ ಆಡಿಯೋ ಮತ್ತು ವಿಡಿಯೋ ಸಂವಾದಗಳು ಉಳಿಸಿಕೊಳ್ಳಲು ಸಾಧ್ಯವಿದ್ದಿದ್ದರೇ ಎಂದು ಅನಿಸಿರಬೇಕಲ್ಲವೇ?

ಇದು ಸಾಧ್ಯವಿದೆ. Skype Call Recorder ಯಾವುದೇ ಲಿನಕ್ಸ್‌ ಬಳಸುವವರು “Skype Call Recorder” ಎನ್ನುವ ಸ್ವತಂತ್ರ  ತಂತ್ರಾಂಶವನ್ನು https://atdot.ch/scr/download/ ಮೂಲಕ ಡೌನ್ಲೋಡ್ ಮಾಡಿಕೊಳ್ಳುವುದರ ಮೂಲಕ ಇದನ್ನು ಸಾಧ್ಯವಾಗಿಸಬಹುದು.

ಇದರ ಮುಖ್ಯ ವೈಶಿಷ್ಟ್ಯಗಳು ಇಂತಿವೆ:

  • ಕರೆಗಳನ್ನು  MP3, Ogg Vorbis or WAV ಫೈಲುಗಳನ್ನಾಗಿ ಸೇವ್ ಮಾಡಿಕೊಳ್ಳಬಹುದು.
  • ಆಟೋಮ್ಯಾಟಿಕ್ ಅಥವಾ ಖುದ್ದಾಗಿ ರೆಕಾರ್ಡಿಂಗ್ ಮಾಡುವ ಸೌಲಭ್ಯ
  • ಪ್ರತಿಯೊಬ್ಬ ಕಾಲರ್‌ಗೆ ಸಂಬಂಧಿಸಿದಂತೆ ಆಟೋ‌ಮ್ಯಾಟಿಕ್ ರೆಕಾರ್ಡಿಂಗ್ ಅಳವಡಿಸಬಹುದು
  • ಸ್ಟೀರಿಯೋ ರೆಕಾರ್ಡಿಂಗ್ ಸೌಲಭ್ಯ
  • ಸಂಪೂರ್ಣ ಉಚಿತ, ಯಾವುದೇ ನಿರ್ಬಂಧಗಳಿಲ್ಲದ , ಸ್ವತಂತ್ರ ತಂತ್ರಾಂಶ, ಗ್ನು/ಜಿ.ಪಿ.ಎಲ್ ಪರವಾನಗಿಯಡಿ ಇದನ್ನು ಬಿಡುಗಡೆಕೊಳಿಸಲಾಗಿದೆ.
  • ನಿಮ್ಮ ಸಿಸ್ಟಂ‌ ಟ್ರೇ ನಲ್ಲಿ ಕೆಲಸ ಮಾಡಬಲ್ಲದು.

ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ನಿಮಗೆ ಸಾಧ್ಯವಿಲ್ಲದಿದ್ದಲ್ಲಿ, ಅಥವಾ ಕಷ್ಟ ಎನಿಸಿದಲ್ಲಿ: ಉಬುಂಟು ಪಿಪಿಯೆ ಬಳಸಿ, ಈ ಕೆಳಕಂಡಂತೆ ತಂತ್ರಾಂಶವನ್ನು ಸ್ಥಾಪಿಸಿಕೊಳ್ಳಬಹುದು.

https://launchpad.net/~dajhorn/+archive/skype-call-recorder

sudo add-apt-repository ppa:dajhorn/skype-call-recorder

sudo aptitude install skype-call-recorder

 

ಜಿಹೆಕ್ಸ್ – ಡೆವೆಲಪರ್‌ಗಳಿಗೆ ಬೇಕಿರುವ ಉಚಿತ ಹೆಕ್ಸ್ ಎಡಿಟರ್

ಮೈಕ್ರೋಕಂಟ್ರೋಲರ್ ಫೈಲುಗಳನ್ನೋ, ಅಥವಾ ತಂತ್ರಾಂಶ ಅಭಿವೃದ್ದಿಯ ಸಮಯದಲ್ಲಿ ಯಾವುದೇ ಕಡತದ ಹೆಕ್ಸ್ (hex) ಕೋಡ್/ಸಂಕೇತಗಳನ್ನು ತಿಳಿದುಕೊಳ್ಳಲು ಸಹಾಯವಾಗಲೆಂದು ಬಳಸುವ ಹೆಕ್ಸ್ ಎಡಿಟರ್‌ಗಳ ಬಗ್ಗೆ ನಿಮಗೆ ತಿಳಿದಿರಬೇಕು. ವಿಂಡೋಸ್‌ನಲ್ಲಿ ಬಳಸುವ ಇಂತಹ ಕೆಲವು ಎಡಿಟರ್‌ಗಳಿಗೆ ಹಣ ವ್ಯಯಿಸಬೇಕಾಗುತ್ತದೆ. ಇಂತದೇ ಎಡಿಟರ್ ನಿಮಗೆ ಲಿನಕ್ಸ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಲಿನಕ್ಸ್‌ನಲ್ಲಿ ಬಳಸುವ ಸಾಮಾನ್ಯ VI ಎಡಿಟರ್ ಕೂಡ ಹೆಕ್ಸ್ ಎಡಿಟರ್ ಮಾದರಿಯಲ್ಲಿ ಕೆಲಸ ಮಾಡಬಲ್ಲದು. ಇದೇ ರೀತಿ ಗ್ರಾಫಿಕಲ್ ಎಡಿಟರ್‌ಗಳನ್ನು ಬಯಸುವವರಿಗೆ ಅನೇಕ ಆಯ್ಕೆಗಳು ಲಭ್ಯವಿವೆ. Ghex, Khexedit, Okteta, Wxhexeditor, lfhex, bless ಜೊತೆಗೆ emacs editor ಕೂಡ hexl-mode ಬೆಂಬಲಿಸುತ್ತದೆ.

Ghex ಎಡಿಟರ್ ಈ ಕೆಳಕಂಡತೆ ಕಾಣುತ್ತದೆ.

ghex ಎಡಿಟರ್

ಇದನ್ನು ಇನ್ಸ್ಟಾಲ್ ಮಾಡಿಕೊಳ್ಳುವುದೂ ಸುಲಭ. ಅದಕ್ಕೆ ಕೆಳಕಂಡ ಕಮ್ಯಾಂಡ್ ಬಳಸಿದರಾಯ್ತು.

$ sudo apt-get install ghex

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇತಿಹಾಸದ ಪುಟಗಳಿಂದ

Related Articles

Related

ಉಬುಂಟು ೧೬.೦೪ ಮತ್ತು ೧೮.೦೪ ನಲ್ಲಿ ಕನ್ನಡ ಟೈಪಿಸುವುದು ಹೇಗೆ?

ಉಬುಂಟುವಿನ ಇತ್ತೀಚಿನ ಆವೃತ್ತಿಗಳಾದ ೧೬.೦೪ ಮತ್ತು ೧೮.೦೪ನಲ್ಲಿ ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳು ಟೈಪಿಸುವುದಕ್ಕಾಗಿ ಕೆಳಗಿನ ಸೂಚನೆಗಳನ್ನು ಪಾಲಿಸಬಹುದು. ಮೊದಲು ನಿಮ್ಮ ಸಿಸ್ಟಂ ಸೆಟ್ಟಿಂಗ್ಸ್‌ನ Language Support ನಲ್ಲಿ ಕನ್ನಡವನ್ನು ಸಕ್ರಿಯಗೊಳಿಸಿ. ಇದು ಕನ್ನಡ ಫಾಂಟ್ಸ್ ಇತ್ಯಾದಿಗಳನ್ನು ಇನ್ಸ್ಟಾಲ್ ಮಾಡುತ್ತದೆ....

read more

ವಿಡಿಯೋ: ಉಬುಂಟುವಿನಲ್ಲಿ ಕನ್ನಡ ಟೈಪಿಸುವುದು ಹೇಗೆ?

ಸೂಚನೆ: ಲಿನಕ್ಸಾಯಣದಲ್ಲಿ ಲೇಖನದ ಜೊತೆಗೆ ವಿಡಿಯೋ ನೆರವನ್ನು ನೀಡುವ ಒಂದು ಪ್ರಯತ್ನ ಇದಾಗಿದೆ. httpv://www.youtube.com/watch?v=8t0vpD-1Mpc ಉಬುಂಟುವಿನಲ್ಲಿ ಕನ್ನಡ ಟೈಪಿಸುವಂತಾಗಲು ನಿಮ್ಮ ಸಿಸ್ಟಂ ಸೆಟ್ಟಿಂಗ್ಸ್‌ನ Language Support ನಲ್ಲಿ ಕನ್ನಡವನ್ನು ಸಕ್ರಿಯಗೊಳಿಸಿ. ಇದು ಕನ್ನಡ ಫಾಂಟ್ಸ್ ಇತ್ಯಾದಿಗಳನ್ನು...

read more

ಐ-ಫೋನ್, ಐ-ಪ್ಯಾಡ್ ಚಾರ್ಜ್ ಮಾಡಿ

ಉಬುಂಟು/ಡೆಬಿಯನ್‌ನಲ್ಲಿ ಐ-ಫೋನ್, ಐ-ಪ್ಯಾಡ್ಗಳನ್ನು ಯು.ಎಸ್.ಬಿ ಮೂಲಕ ಕನೆಕ್ಟ್ ಮಾಡಿದಾಗ ಇತರೆ ಮೊಬೈಲ್‌ಗಳಂತೆ ಅವು ಚಾರ್ಜ್ ಆಗುವುದಿಲ್ಲ. ಇದಕ್ಕೆಂದೇ ipad_charge ಎಂಬ ತಂತ್ರಾಂಶ ಲಭ್ಯವಿದೆ. ಇದನ್ನು ಬಳಸಿ, ಈ ಕೆಳಗೆ ನೀಡಿರುವ ಆಪಲ್ ಹಾರ್ಡ್‌ವೇರ್‌ಗಳನ್ನು ಚಾರ್ಜ್ ಮಾಡಬಹುದು. iPad iPad2 iPad3 iPad mini iPod Touch...

read more