ತಂತ್ರಾಂಶಗಳು

Written By Omshivaprakash H L

November 18, 2018

ಫೈರ್‌ಫಾಕ್ಸ್ ಬ್ರೌಸರ್‌ ಲೋಕಲೈಸೇಷನ್ ಅನ್ಲೈನ್ ಸ್ಪ್ರಿಂಟ್ (ಕನ್ನಡೀಕರಣ)

ಫೈರ್‌ಫಾಕ್ಸ್ ಬ್ರೌಸರ್‌ ಲೋಕಲೈಸೇಷನ್ ಅನ್ಲೈನ್ ಸ್ಪ್ರಿಂಟ್ (ಕನ್ನಡೀಕರಣ)‍ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಕ್ತ ಮತ್ತು ಅತ್ಯಂತ ಸುರಕ್ಷಿತ ಮತ್ತು ಸದೃಡ ಬ್ರೌಸರ್ ಅನ್ನು ಕನ್ನಡದಲ್ಲೇ ಬಳಸಿ.

ಇದಕ್ಕೆ ನೀವು ಮಾಡಬೇಕಿರುವುದಿಷ್ಟೆ –

‍‍೧. https://pontoon.mozilla.org/kn/ ‍‍‍‍‍ಇಲ್ಲಿ ನೊಂದಾಯಿಸಿಕೊಳ್ಳಿ / ‍‍‍‍ಲಾಗಿನ್ಆಗಿ‍‍‍‍.‍

‍‍‍‍‍‍‍‍‍೨. ‍ಸೈನ್‌ಇನ್ ಆದ ನಂತರ ನೇರವಾಗಿ ಕನ್ನಡದ ಯೋಜನೆಗಳ ಅನುವಾದ ಕಾರ್ಯಗಳಲ್ಲಿ ನೇರವಾಗಿ ಭಾಗವಹಿಸಬಹುದು. ಲಭ್ಯವಿಲ್ಲದ ಅನುವಾದಗಳಿಗೆ ನಿಮ್ಮ ಸಲಹೆ ಸೇರಿಸಬಹುದು.‍‍‍‍

‍‍

‍‍‍‍‍‍‍‍‍ಕನ್ನಡದ ಯೋಜನೆಗಳ ಸ್ಥಳೀಕರಣ/ಲೋಕಲೈಸೇಷನ್ ಕೆಲಸ ಆಯ್ದ ಅನ್ವಯಗಳಿಗೆ ಶೇಕಡ ೮೧ರಷ್ಟು ಮುಗಿದಿದ್ದು, ಹತ್ತಾರು ಸ್ವಯಂ ಸೇವಕರ ಸಹಾಯ ಅವಶ್ಯವಿದೆ. 

‍‍ನೀವೂ ಭಾಗವಹಿಸಿ ನಿಮ್ಮ ಗೆಳೆಯರನ್ನೂ ಕರೆತನ್ನಿ. ಮುಂದಿನ ತಿಂಗಳಲ್ಲಿ ಬಿಡುಗಡೆಗೊಳ್ಳುವ ಫೈರ್‌ಫಾಕ್ಸ್‌ನಲ್ಲಿ ಸಂಪೂರ್ಣ ಕನ್ನಡ ಅಳವಡಿಸಲು ನಮಗೆ ನೀಡಿರುವ ಕಡೆಯ ದಿನಾಂಕ ನವೆಂಬರ್ ೨೭.

ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ – ಬೆಂಗಳೂರು

ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ – ಬೆಂಗಳೂರು, ಐ.‌ಐ.ಎಂ.ಬಿ ಕ್ಯಾಂಪಸ್‌ನಲ್ಲಿ ನವೆಂಬರ್ ೧೭-೧೮ರಂದು ನೆಡೆಯುತ್ತಿದೆ. ಇದು ಏಷ್ಯಾದ ಓಪನ್ ಸ್ಟ್ರೀಟ್ ಮ್ಯಾಪ್ ಸಮುದಾಯಗಳ ವಾರ್ಷಿಕ ಸಮ್ಮೇಳನವಾಗಿದ್ದು, ೨೦೧೫ರಲ್ಲಿ ಪ್ರಾರಂಭವಾಗಿತ್ತು. ‍ ಮೊದಲ ಸ್ಟೇಟ್ ಆಫ್ ಮ್ಯಾಪ್ ಏಷ್ಯಾ (SOTMA) ಅನ್ನು ಜಕಾರ್ತ, ಇಂಡೋನೇಷಿಯಾದಲ್ಲಿ ೨೦೧೫ರಲ್ಲಿ ಆಯೋಜಿಸಲಾಗಿತ್ತು ಮತ್ತು ಎರಡನೆಯದನ್ನು ‍ಮನಿಲಾ, ಫಿಲಿಫೈನ್ಸ್ ನಲ್ಲಿ ೨೦೧೬ರಲ್ಲಿ ಆಯೋಜಿಸಲಾಗಿತ್ತು. ‍ಈ ಸರಣಿಯ ಮೂರನೆಯ ಸಮ್ಮೇಳನವನ್ನು ಕಟ್ಮಂಡು ನೇಪಾಳದಲ್ಲಿ ೨೦೧೭ರಲ್ಲಿ ಅಯೋಜಿಸಲಾಗಿತ್ತು. ಈ ಸಮ್ಮೇಳನಗಳು ಸ್ಥಳೀಯ ಸಮುದಾಯಗಳನ್ನು ಒಟ್ಟುಗೂಡಿಸುವ, ತಾಂತ್ರಿಕ, ‍‍ಸಾಂಸ್ಕೃತಿಕ, ‍‍ಕಾರ್ಯನೀತಿ ಮತ್ತು ‍ಆಡಳಿತದ ವಿಷಯಗಳಿಗೆ ಸಂಬಂಧಿಸಿದ ಅನೇಕ ‍ಸವಾಲುಗಳನ್ನು ಹಂಚಿಕೊಳ್ಳುವ ಮತ್ತು ‍ಕಲಿಯುವ ‍‍ಸ್ಥಳಗಳಾಗಿದ್ದು, ಒ.ಎಸ್.ಎಮ್ ‍ಚಳುವಳಿಯನ್ನು ಏಷ್ಯಾದಲ್ಲಿ ಮುನ್ನೆಡೆಸಲು ಸಹಾಯಕವಾಗಿವೆ.

ಈ ವರ್ಷದ ‍‍‍‍‍ಸಮ್ಮೇಳನವನ್ನು ಸ್ಟೇಟ್ ಆಫ್ ಮ್ಯಾಪ್ ಏಷ್ಯಾ, ೨೦೧೮ ‍ಸಮಿತಿ (SOTMAC), ಐ.ಐ.ಎಂ ಬೆಂಗಳೂರು, ಮತ್ತು ದ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿ ಜಂಟಿಯಾಗಿ ಆಯೋಜಿಸುತ್ತಿವೆ. ಇದು ೨ ದಿನಗಳ ಸಮ್ಮೇಳನವಾಗಿರಲಿದ್ದು ೨೦೧೮ರ ವೆಂಬರ್ ೧೭ & ೧೮ ರಂದು ನೆಡೆಯಲಿದೆ. ಈ ಎರಡು ದಿನಗಳ ಕಾರ್ಯಕ್ರಮ, ‍ಓಪನ್ ಸ್ಟ್ರೀಟ್ ಮ್ಯಾಪ್‌ನ ಪರಿಣಾಮ, ಪ್ರಸ್ತುತತೆ ಮತ್ತು ತಾಂತ್ರಿಕ ಅಂಶಗಳ ಬಗ್ಗೆ ಮಾತುಕತೆಗಳು ಮತ್ತು ಕಾರ್ಯಾಗಾರಗಳನ್ನು ಒಳಗೊಂಡಿರುತ್ತದೆ. ಈ ಸಮ್ಮೇಳನದ ಮುಖ್ಯ ಭಾಷಣಗಳನ್ನು ಪುಕಾರ್ ನ ಸಿ.ಇ.ಒ  ಡಾ. ಅನಿತಾ ಪಾಟೀಲ್-ದೇಶ್ಮುಖ್ ಮತ್ತು ಕಬಿಡಿವಾಲಾ ಕನೆಕ್ಟ್‌ನ ಸಿ.ಇ.ಒ ಸಿದ್ದಾರ್ಥ್ ಹ್ಯಾಂಡೆಯ ಮಾಡಲಿದ್ದಾರೆ – ಭಾರತ ಮತ್ತು ವಿಶ್ವದ ಬೇರೆ ಬೇರೆ ಭಾಗಗಳಲ್ಲಿನ ವಿವಿಧ ನಗರ ಪರಿಸರದಲ್ಲಿ ಸಕ್ರಿಯ ಸಮುದಾಯ-ಚಾಲಿತ ಬದಲಾವಣೆಗಳನ್ನು ಎತ್ತಿ ತೋರಿಸುವುದು ಈ ಭಾಷಣಗಳ ಉದ್ದೇಶ. ಸಮ್ಮೇಳನ ಅನೇಕ ಮಾತುಕತೆಗಳು ಮತ್ತು ಕಾರ್ಯಾಗಾರಗಳ ಮೂಲಕ ಮ್ಯಾಪಿಂಗ್ ಬಗ್ಗೆ ತಿಳಿಯಲು ಉತ್ತಮ ಅವಕಾಶವಾಗಿದೆ.

ಓಪನ್ ಸ್ಟ್ರೀಟ್ ಮ್ಯಾಪ್ (ಓ.ಎಸ್.ಎಂ) (OSM/OpenStreetMap) ವಿಶ್ವದ ನಕ್ಷೆಯನ್ನು ಸ್ವತಂತ್ರವಾಗಿ ಸಂಪಾದಿಸಬಲ್ಲ ಒಂದು ಸಮುದಾಯ ಯೋಜನೆ ಆಗಿದೆ. ‍ಓ.ಎಸ್.ಎಂ ಅನ್ನು ಸ್ವಯಂಸೇವಕರ ಮೂಲಕ ಸಂಪಾದಿಸಿದ ಭೌಗೋಳಿಕ ಮಾಹಿತಿಯ ಒಂದು ಪ್ರಮುಖ ಉದಾಹರಣೆ‍ಯಾಗಿ ಪರಿಗಣಿಸಲಾಗುತ್ತದೆ. ಸಮುದಾಯದ ಪ್ರಾರಂಭದಿಂದ ಗಮನಿಸಿದಲ್ಲಿ, ಇದು ‍‍ಸಮೀಕ್ಷೆಗಳು, ಜಿಪಿಎಸ್ ಸಾಧನಗಳು, ಏ‍ರಿಯಲ್‍ ‍ಚಿತ್ರಗಳು ಮತ್ತು ಇತರೆ ಸ್ವತಂತ್ರ ಮೂಲಗಳಿಂದ ದತ್ತಾಂಶ ಸಂಗ್ರಹಿಸಬಲ್ಲ ೫ ಮಿಲಿಯನ್‌ಗಿಂತಲೂ ಹೆಚ್ಚು ಸ್ವಯಂಸೇವಕರನ್ನು ಹೊಂದಿದೆ. ‍‍‍‍

ಈ ‍‍ಸಮುದಾಯ ಸಹಭಾಗಿತ್ವದ ದತ್ತಾಂಶವನ್ನು ಓಪನ್ ಡೇಟಾಬೇಸ್ ಪರವಾನಗಿ ಅಡಿ ಲಭ್ಯವಾಗಿಸಲಾಗಿದೆ. ಈ ಯೋಜನೆ ಓಪನ್ ಸ್ಟ್ರೀಟ್ ಮ್ಯಾಪ್ ಫೌಂಡೇಷನ್‌ನಿಂದ ಬೆಂಬಲಿತವಾಗಿದೆ.

— ಈ ಮೇಲಿನ ಮಾಹಿತಿಯನ್ನು ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ದ ಮಾಹಿತಿ ಪುಸ್ತಕದಿಂದ ಪಡೆದುಕೊಳ್ಳಲಾಗಿದೆ. 

ಸಮ್ಮೇಳನದ ಮಾಹಿತಿಯನ್ನು ಸಮುದಾಯದ ಸದಸ್ಯರು #SotMAsia18 ಟ್ಯಾಗ್‌ನಡಿ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಾರೆ. ಆಸಕ್ತರು ಗಮನಿಸಬಹುದು.

ಡಿ‍.ಟಿ.ಪಿ ಮಾಡುತ್ತಿದ್ದಲ್ಲಿ ಸ್ವತಂತ್ರ ತಂತ್ರಾಂಶ ಸ್ಕ್ರೈಬಸ್ ಬಳಸಿ

‍ ‍ಕನ್ನಡದಲ್ಲಿ ಡಿಟಿಪಿ ಮಾಡಲು ‍‍ಇದುವರೆಗೆ ಮುಕ್ತ ಹಾಗೂ ಸ್ವತಂತ್ರ ತ್ರಂತ್ರಾಂಶದಲ್ಲಿ ( Free & Open Source Software) ಇದ್ದ ಕೊರತೆಯನ್ನು ಕೊನೆಗೂ ಸ್ಕ್ರೈಬಸ್‍‍‍‍ ತುಂಬಿದೆ. ಸ್ಕ್ರೈಬಸ್‌ನ ಡೆವೆಲಪ್‌ಮೆಂಟ್ ಆವೃತ್ತಿ ೧.೫.೩ರಲ್ಲಿ ಕನ್ನಡದ ಜೊತೆಗೆ ಇನ್ನೂ ಅನೇಕ ಕ್ಲಿಷ್ಟ ಪದಜೋಡಣೆ ಅವಶ್ಯವಿದ್ದ ಭಾರತೀಯ ಭಾಷೆಗಳಿಗೆ ಬೆಂಬಲವನ್ನು ಒದಗಿಸಲಾಗಿದೆ. ‍ಈ ಕೆಳಗಿನ ಚಿತ್ರಗಳಲ್ಲಿ ಸ್ಕ್ರೈಬಸ್ ಜೊತೆ ಕನ್ನಡ ಮೂಡುವುದನ್ನು ಲಿನಕ್ಸ್, ವಿಂಡೋಸ್ ಜೊತೆಗೆ ಮ್ಯಾಕ್‌ನಲ್ಲೂ ಕಾಣಬಹುದು.

 

‍‍

ಸ್ಕ್ರೈಬಸ್‌ನ ಈ ಆವೃತ್ತಿಯ ಬಗ್ಗೆ ಈ ಕೊಂಡಿಯಲ್ಲಿ ಮತ್ತಷ್ಟು ವಿಷಯ ತಿಳಿದುಕೊಳ್ಳಬಹುದು : https://wiki.scribus.net/canvas/1.5.3_Release

‍‍ಈ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ಕೊಂಡಿ ಬಳಸಿ: https://www.scribus.net/downloads/unstable-branch/

‍‍ಈ ತಂತ್ರಾಂಶವನ್ನು ಬಳಸಿ, ಇದರಲ್ಲಿರುವ ನ್ಯೂನ್ಯತೆಗಳನ್ನು ತಿಳಿಸಿ, ಸರಿಪಡಿಸೋಣ.  ಆಡೋಬ್ ಫೋಟೋಶಾಪ್ ಇತ್ಯಾದಿಗಳ ಪೈರೇಟೆಡ್ ಖಾಸಗೀ ತಂತ್ರಾಂಶಗಳನ್ನು ಡಿಟಿಪಿ ಕೇಂದ್ರಗಳಲ್ಲಿ ಬಳಸುವುದನ್ನು ತಪ್ಪಿಸಲು ಇದು ಸಹಕಾರಿ.

ಉಬುಂಟುವಿನಲ್ಲಿ ಸ್ಕೈಪ್ ಮೆಸೆಂಜರ್ ಐಕಾನ್ ಸ್ಟೇಟಸ್ ಬಾರ್‌ನಲ್ಲಿ ಕಾಣುತ್ತಿಲ್ಲವೇ?

ಉಬುಂಟುವಿನಲ್ಲಿ ಸ್ಕೈಪ್ ಮೆಸೆಂಜರ್ ಐಕಾನ್ ಸ್ಟೇಟಸ್ ಬಾರ್‌ನಲ್ಲಿ ಕಾಣುತ್ತಿಲ್ಲವೇ? ಹಾಗಿದ್ದಲ್ಲಿ,  sni-qt:i386 ಪ್ಯಾಕೇಜ್ ಇನ್ಸ್ಟಾಲ್ ಮಾಡಿಕೊಳ್ಳಿ. 

$ sudo apt-get install sni-qt:i386

ಈಗ ಸೈಪ್ ಮೆಸೆಂಜರ್ ಪ್ರಾರಂಭಿಸಿದರೆ ಐಕನ್ ಕಾಣುವಿರಿ.

 

ಉಬುಂಟುವಿನ ಪ್ಯಾನೆಲ್‌ನಲ್ಲಿ ದಿನಾಂಕ ಮತ್ತು ಸಮಯ ಕಾಣುತ್ತಿಲ್ಲವೇ?

ಕೆಲವೊಮ್ಮೆ ಉಬುಂಟುವಿನ ಪ್ಯಾನೆಲ್‌ನಲ್ಲಿ ದಿನಾಂಕ ಮತ್ತು ಸಮಯ ಕಾಣುತ್ತಿಲ್ಲ ಎಂದಾದರೆ, ಈ ಕೆಳಗಿನ ಕಮ್ಯಾಂಡ್ ಬಳಸಿ ಮತ್ತೆ ದಿನಾಂಕ ಮತ್ತು ಸಮಯ ಕಾಣುವಂತೆ ಮಾಡಿ.

$ dconf reset -f /com/canonical/indicator/datetime/

 

ಇದರಿಂದ ಪರಿಹಾರ ಸಿಗಲಿಲ್ಲವೆಂದಾದರೆ, ಈ ಕೆಳಗಿನವುಗಳನ್ನೂ ಪ್ರಯೋಗಿಸಿ ನೋಡಬಹುದು.

$ aptitude reinstall indicator-datetime
$ sudo apt-get remove –purge indicator-datetime and install it again
$ sudo dpkg-reconfigure –frontend noninteractive tzdata
$ sudo killall unity-panel-service

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇತಿಹಾಸದ ಪುಟಗಳಿಂದ

Related Articles

Related

ಟೆಸರಾಕ್ಟ್ ಓಸಿಆರ್ ಅನ್ನು ವಿಂಡೋಸ್‌ನಲ್ಲಿ ಬಳಸುವುದು

ಟೆಸರಾಕ್ಟ್ ಓಸಿಆರ್ ಅನ್ನು ವಿಂಡೋಸ್‌ನಲ್ಲಿ ಬಳಸಲು ಈ ಕೆಳಗಿನ ಮಾಹಿತಿ ನಿಮಗೆ ಉಪಯುಕ್ತವಾಗಬಹುದು. ಟೆಸರಾಕ್ಟ್ ಬಳಸಲು ಈ ಕೆಳ‍ಗಿನ ತಂತ್ರಾಂಶಗಳನ್ನು ಮೊದಲು ಇನ್ಸ್ಟಾಲ್ ಮಾಡಿಕೊಳ್ಳಿ. ‍1. Java Version 13 - https://www.oracle.com/technetwork/java/javase/downloads/jdk13-downloads-5672538.html 2....

read more

Tesseract (ಟೆಸೆರಾಕ್ಟ್) ಮತ್ತು ಕನ್ನಡ ಓ.ಸಿ.‌ಆರ್

‍‍‍‍‍ಕಳೆದ ತಿಂಗಳಿನಿಂದ ಕನ್ನಡ ಓ.ಸಿ.‌ಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್) ಗಾಗಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶವಾದ ಟೆಸೆ‍ರಾಕ್ಟ್‍ (https://github.com/tesseract-ocr/tesseract & https://en.wikipedia.org/wiki/Tesseract_(software)) ಬಳಸಿದ್ದು ಮತ್ತು ಅದು ಕನ್ನಡದ ಮಟ್ಟಿಗೆ...

read more

ಫೈರ್‌ಫಾಕ್ಸ್ ಬ್ರೌಸರ್‌ ಲೋಕಲೈಸೇಷನ್ ಅನ್ಲೈನ್ ಸ್ಪ್ರಿಂಟ್ (ಕನ್ನಡೀಕರಣ)

ಫೈರ್‌ಫಾಕ್ಸ್ ಬ್ರೌಸರ್‌ ಲೋಕಲೈಸೇಷನ್ ಅನ್ಲೈನ್ ಸ್ಪ್ರಿಂಟ್ (ಕನ್ನಡೀಕರಣ)‍ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಕ್ತ ಮತ್ತು ಅತ್ಯಂತ ಸುರಕ್ಷಿತ ಮತ್ತು ಸದೃಡ ಬ್ರೌಸರ್ ಅನ್ನು ಕನ್ನಡದಲ್ಲೇ ಬಳಸಿ. ಇದಕ್ಕೆ ನೀವು ಮಾಡಬೇಕಿರುವುದಿಷ್ಟೆ - ‍‍೧. https://pontoon.mozilla.org/kn/ ‍‍‍‍‍ಇಲ್ಲಿ ನೊಂದಾಯಿಸಿಕೊಳ್ಳಿ /...

read more