Currently Browsing: ಸುದ್ದಿ

ಮೊಝಿಲ್ಲಾ ಫೈರ್ಫಾಕ್ಸ್ ಆಂಡ್ರಾಯ್ ಮೊಬೈಲ್ ಆವೃತ್ತಿ ಕನ್ನಡದಲ್ಲಿ

ಬಿಡುಗಡೆಗೆ ಮುನ್ನ – ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದೆ ಸ್ಯಾಮ್‌ಸಂಗ್ ಮೊಬೈಲ್‌ಗಳು ೯ ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತಿರುವ ವಿಷಯ ತಿಳಿದ ಮೊಝಿಲ್ಲಾ ತಂಡ, ಆ ಎಲ್ಲಾ ಭಾರತೀಯ ಭಾಷೆಗಳಲ್ಲಿ ಮೊಝಿಲ್ಲಾ ಫೈರ್ಫಾಕ್ಸ್‌ನ ಫೆನೆಕ್ (Fennec) ಆವೃತ್ತಿಯನ್ನು ಹೊರತರಲು ಸಂಬಂಧಪಟ್ಟ ಸಮುದಾಯಗಳನ್ನು ಮಾರ್ಚ್‌ನಲ್ಲಿ ಸಂಪರ್ಕಿಸಿತ್ತು. ಅದರಲ್ಲಿ ಕನ್ನಡವೂ ಒಂದು. ಫೆನೆಕ್ ಆವೃತ್ತಿ ೩೧ರಲ್ಲಿ ಕನ್ನಡವನ್ನೂ ನೋಡುವ ಅವಕಾಶ ಇದರಿಂದ ಲಭ್ಯವಾಯಿತು (ಮೊಬೈಲ್‌ನಲ್ಲಿ). ಈಗಾಗಲೇ ಮೊಝಿಲ್ಲಾ ಡೆಸ್ಕ್‌ಟಾಪ್ ಆವೃತ್ತಿ...

ಉಚಿತ ಲಿನಕ್ಸ್ ತರಬೇತಿ – ಎಲ್ಲರಿಗಾಗಿ

ಲಿನಕ್ಸ್ ಫೌಂಡೇಷನ್ ಹಾರ್ವರ್ಡ್ ಮತ್ತು ಎಂ.ಐ.ಟಿ ಜೊತೆಗೂಡಿ ನಿರ್ವಹಿಸುತ್ತಿರುವ edX ಆನ್ಲೈನ್ ಕಲಿಕಾ ಜಾಲತಾಣದ ಮೂಲಕ ೨೪೦೦$ ರಷ್ಟು ವೆಚ್ಚದ ‘Introduction to Linux’ ಎಂಬ ಲಿನಕ್ಸ್ ಕೋರ್ಸ್ ಅನ್ನು ಈ ಬೇಸಿಗೆಯಲ್ಲಿ ಎಲ್ಲರಿಗಾಗಿ ಉಚಿತವಾಗಿ ನೀಡುತ್ತಿದೆ. ಆಗಸ್ಟ್ ೧ ಪ್ರಾರಂಭವಾಗಲಿರುವ ಈ ಕೋರ್ಸ್‌ಗೆ ಈಗಾಗಲೇ ೨೫೦೦ಕ್ಕೂ ಹೆಚ್ಚು ಜನ ನೊಂದಾಯಿಸಿಕೊಂಡಿದ್ದಾರೆ. ೪೦ ರಿಂದ ೬೦ ಘಂಟೆಗಳ ಈ ಕೋರ್ಸ್ ಲಿನಕ್ಸ್ ಬಗ್ಗೆ ಯಾವ ವಿಷಯವನ್ನೂ ಅರಿಯದ, ಲಿನಕ್ಸ್ ಮತ್ತು ಮುಕ್ತ ತಂತ್ರಾಂಶದ ಬಳಕೆಯನ್ನು ಅರಿಯಲು...

ಲಿನಕ್ಸ್ ವಾಯ್ಸ್ – ಹೊಸ ಲಿನಕ್ಸ್ ಮ್ಯಾಗಜೀನ್

ಲಿನಕ್ಸ್ ಬಳಕೆದಾರರಿಗೆ ಎಂದೇ ಮುದ್ರಿತವಾಗುತ್ತಿರುವ ಹೊಸ ಮ್ಯಾಗಜೀನ್ ಲಿನಕ್ಸ್ ವಾಯ್ಸ್, ಇನ್ನೇನು ಮುದ್ರಿತ ಪತ್ರಿಕೆಗಳೂ ಹೊರಬರುವುದು ಕಷ್ಟ ಎಂದು ಎಲ್ಲರೂ ಮಾತನಾಡುವ ಸಮಯದಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿರುವುದಂತೂ ನಿಜ. ಲಿನಕ್ಸ್ ವಾಯ್ಸ್ ಹಿಂದಿರುವ ನಾಲ್ಕು ಜನರಲ್ಲಿ ಒಬ್ಬರಾಗಿರುವ ಗ್ರಹಾಮ್ ಮ್ಯಾರಿಸನ್ ಅವರ ಇಂಟರ್ವ್ಯೂ ಈ ಮ್ಯಾಗಜೀನ್ ಬಗ್ಗೆ ಹೆಚ್ಚಿನ ಮಾಹಿತಿ...

ಲೈಟ್‌ವರ್ಕ್ಸ್ ಈಗ ಲಿನಕ್ಸ್‌ಗೆ ಕೂಡ ಲಭ್ಯವಿದೆ

೨೦ ವರ್ಷಗಳಿಂದ ಅದೆಷ್ಟೋ ಫಿಲಂಗಳನ್ನು ಲೈಟ್‌ವರ್ಕ್ಸ್ ತಂತ್ರಾಂಶದಿಂದ ತಂತ್ರಜ್ಞರು ವಿಡಿಯೋ ಹಾಗೂ ಆಡಿಯೋ ಎಡಿಟಿಂಗ್‌ಗಾಗಿ ಬಳಸಿದ್ದಾರೆ. ಅದೆಷ್ಟೋ ಮಂದಿ ಆಸ್ಕರ್ ಪ್ರಶಸ್ತಿ ಪುರಸ್ಕೃತರು ಈ ತಂತ್ರಾಂಶ ಬಳಸಿದ್ದಾರೆ. ಅನೇಕ ವಿಡಿಯೋ, ಆಡಿಯೋ ಫಾರ್ಮ್ಯಾಟ್‌ಗಳಿಗೆ ಬೆಂಬಲ, ಚೆಂದದ ಟೈಮ್‌ಲೈನ್, ರೆಸೊಲ್ಯೂಷನ್, ಫಾರ್‌ಮ್ಯಾಟ್ ಮತ್ತು ಕೋಡೆಕ್ ಗಳಿಗೆಂದೇ ಬೇರೆಬೇರೆ ಟೈಮ್‌ಲೈನ್ ಹೊಂದಿರುವುದು, ಟ್ರಿಮ್ಮಿಂಗ್ ಸುಲಭವಾಗಿರುವುದು, ಒಂದಕ್ಕಿಂತ ಹೆಚ್ಚು ಕ್ಯಾಮೆರಾಗಳಿಂದ ಸಿಂಕ್ ಮಾಡುವ ಸೌಲಭ್ಯ, ಸ್ಟೀರಿಯೋಸ್ಕೋಪಿಕ್...

ವ್ಯಾವಹಾರಿಕ ಕಂಪ್ಯೂಟರ್‌ ಬಳಕೆದಾರರ ವರದಿ ೨೦೧೩

ಐ.ಟಿ ಉದ್ಯಮದಲ್ಲಿ ಲಿನಕ್ಸ್ ಮತ್ತು ಸಂಬಂಧಿತ ಸಾಫ್ಟೇರ್ ಬಳಕೆ ವಿಶ್ವದ ಅತಿದೊಡ್ಡ ಕಂಪೆನಿಗಳಲ್ಲಿ ಹೆಚ್ಚುತ್ತಲೇ ಇದೆ. ಲಿನಕ್ಸ್ ಫೌಂಡೇಶನ್, Yeoman ಟೆಕ್ನಾಲಜಿ ಗೂಪ್ ಜೊತೆಗೂಡಿ ಸಿದ್ದಪಡಿಸಿರುವ ೨೦೧೩ರ ವ್ಯಾವಹಾರಿಕ ಕಂಪ್ಯೂಟರ್‌ ಬಳಕೆದಾರರ ವರದಿ ಇದರತ್ತ ಬೆಳಕು ಚೆಲ್ಲುತ್ತದೆ. ಈ ವರದಿಯ ಸಂಪೂರ್ಣ ವಿವರದ ಕೊಂಡಿ...

« Previous Entries Next Entries »

Powered by HostRobust | © 2006 - 2014 Linuxaayana